ನಮಸ್ಕಾರ.
ಸುಮಾರು ಒಂದು ದಶಕದ ಹಿಂದೆ ಮಿತ್ರರಾದ ಶ್ರೀ ಶೇಷಾದ್ರಿವಾಸು ಅವರ ಬರಹವನ್ನು ಬಳಸಿ ಪಂಡಿತ ಪುಟ ಜಾಲತಾಣವನ್ನು ಜಿಯೊಸಿಟಿಸ್.ಕಾಮ್ ನಲ್ಲಿ ಆರಂಭಿಸಿದ್ದೆ. ಕೆಲವು ಕಾಲ ಅದನ್ನು ನಿಯತವಾಗಿ ಪ್ರಕಟಿಸಿದೆ. ಈ ನಡುವೆ ಕನ್ನಡ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆದವು. ಕನ್ನಡ ಗಣಕ ಪರಿಷತ್ತಿನ ಸ್ಥಾಪನೆ ಆಯಿತು. ಕನ್ನಡ ಲಿಪಿ ತಂತ್ರಾಂಶದಲ್ಲಿ ಶಿಷ್ಟತೆ ಸಾಧ್ಯವಾಯಿತು. ಪ್ರಮಾಣ ಲಿಪಿ ತಂತ್ರಾಂಶವಾಗಿ ನುಡಿ ಲಭ್ಯವಾಯಿತು. ತಂತ್ರಜ್ಞಾನ ಬೆಳೆದಂತೆ ಯೂನಿಕೋಡ್‌ನಲ್ಲಿ ಕನ್ನಡವನ್ನು ಸಮರ್ಪಕವಾಗಿ ಮೂಡಿಸುವುದು ಸಾಧ್ಯವಾಯಿತು. ಸಾವಿರಾರು ಜಾಲಚರಿಗಳು(ವೆಬ್ ಲಾಗ್‌ಗಳು) ಅರಳಿದವು. ಜಿಯೋಸಿಟಿಸ್ ತನ್ನ ಸೇವೆಯನ್ನು ನಿಲ್ಲಿಸಿತು.
ಈಗ ಪಂಡಿತ ಪುಟಗಳನ್ನು ಮತ್ತೆ ಆರಂಭಿಸುತ್ತಿದ್ದೇನೆ. ಇಲ್ಲಿನ ಪುಟಗಳನ್ನು ಪಂಡಿತ ಎಂದು ಮಾತ್ರ ಹೆಸರಿಸಿದ್ದೇನೆ. ಇದು ಅಂತರ ಜಾಲದಲ್ಲಿ ಬರೆಯುವ ದಿನಚರಿಯಾದ್ದರಿಂದ ಇದನ್ನು ಜಾಲಚರಿ ಎಂದೇ ಕರೆದಿದ್ದೇನೆ. ಇದು ನಿಮಗೆ ಮೆಚ್ಚಿಗೆಯಾಗಬಹುದು ಎಂಬ ನಿರೀಕ್ಷೆ ನನ್ನದು.
ನಿಮ್ಮ ಮುಕ್ತ ಅನಿಸಿಕೆಗಳಿಗೆ ಸದಾ ಸ್ವಾಗತವಿದೆ.
ಪ್ರೀತಿಯಿಂದ
ಪಂಡಿತಾರಾಧ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ